“ಕಲಬುರಗಿಯಲ್ಲಿ ಎರಡು ದಿನಗಳ ಉಚಿತ ಹೃದಯ ತಪಾಸಣಾ ಶಿಬಿರ: 180 ಮಕ್ಕಳ ತಪಾಸಣೆ — 46 ಕ್ಕೆ ಶಸ್ತ್ರಚಿಕಿತ್ಸೆಗೆ ಆಯ್ಕೆ; ಸಂವಿಧಾನ ಪೀಠಿಕೆ ಓದು ಮುಖಾಂತರ ಉದ್ಘಾಟನೆ”“

ಕಲಬುರಗಿ, ನವೆಂಬರ್ 25:
ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ (RBSK) ಕಾರ್ಯಕ್ರಮದಡಿ ನವೆಂಬರ್ 25ಮತ್ತು 26 ರಂದು ಎರಡು ದಿನಗಳ ಕಾಲ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ತಾಂತ್ರಿಕ ಸಹಯೋಗದಲ್ಲಿ ಆಯೋಜಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತ್ನಾಳ ಅವರ ಅಧ್ಯಕ್ಷತೆಯಲ್ಲಿ ಮತ್ತು RCHO ಡಾ ಸಿದ್ದು ಪಾಟೀಲ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಭಾರತೀಯ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಪ್ರೇರಣಾದಾಯಕ ಚಾಲನೆ ನೀಡಲಾಯಿತು.

ಈ ಶಿಬಿರದಲ್ಲಿ ಅಂಗನವಾಡಿ ಮತ್ತು ಶಾಲೆಗಳಲ್ಲಿ ಓದುತ್ತಿರುವ ಹುಟ್ಟಿನಿಂದ 18 ವರ್ಷದೊಳಗಿನ ಒಟ್ಟು 180 ಮಕ್ಕಳ ಹೃದಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಇವರಲ್ಲಿ 46 ಮಕ್ಕಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಡಾ. ಸಿದ್ದು ಪಾಟೀಲ್ ಅವರು ಮಕ್ಕಳ ಆರೋಗ್ಯದ ಬಗ್ಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅಜಯಕುಮಾರ್ ಭಾಗವಹಿಸಿದ್ದರು.
ಶಿಬಿರವನ್ನು ಜಿಲ್ಲಾ RCH ಅಧಿಕಾರಿ ಡಾ. ಸಿದ್ದು ಪಾಟೀಲ್ ಅವರ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ನಡೆಸಲಾಯಿತು.

ಸಂಘಟಕರು ಮತ್ತು ವೈದ್ಯಕೀಯ ತಂಡ

RBSK–DEIC ವ್ಯವಸ್ಥಾಪಕ ಕೃಷ್ಣ ಎಸ್. ವಗ್ಗೆ

RBSK ವೈದ್ಯಾಧಿಕಾರಿಗಳು: ಡಾ. ಪ್ರವೀಣ್ ಜೋಶಿ, ಡಾ. ಪ್ರಮೋದ್, ಡಾ. ಸೋಮೇಶ್ವರಿ, ಡಾ. ರಾಕೇಶ್, ಡಾ. ಕಾವೇರಿ, ಡಾ. ನಾಗರತ್ನ, ಡಾ. ಸಂಘರ್ಶಿ, ಡಾ. ಮಾಂತೇಶ, ಡಾ. ಸಿದ್ದು

ವೈದೇಹಿ ಆಸ್ಪತ್ರೆ ವೈದ್ಯಾಧಿಕಾರಿ ನರೇಶ್

ಆಶಾ ಕಾರ್ಯಕರ್ತೆಯರು ಮತ್ತು ನರ್ಸಿಂಗ್ ಆಫೀಸರ್ಸ್ ಸಿಬ್ಬಂದಿ: ರೇಖಾ, ನಾಗರತ್ನ, ಆಶಾರಾಣಿ, ರಾಧಾ

ಶಿಕ್ಷಣ ಇಲಾಖೆಯ BEO,BEIRT, BRC, CRP ತಂಡಗಳು ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳ ಸಿಬ್ಬಂದಿ

ಪಾಲಕರು, ವಿದ್ಯಾರ್ಥಿಗಳು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಈ ಆರೋಗ್ಯ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿತು.

Leave a Reply

Your email address will not be published. Required fields are marked *

error: Content is protected !!