ಅಫಜಲಪೂರ

ತಾಲ್ಲೂಕಿನ ದೇವಲ ಗಾಣಗಾಪೂರ ಗ್ರಾಮದ ಮಾತಾ ಮಾಣಿಕೇಶ್ವರ ವೃತ್ತದಲ್ಲಿ ಕನ್ನಡ ಚಿತ್ರರಂಗದ ಪರಮ ಪ್ರತಿಭೆ, ಜನಮನಗಳ ಅಮರ ನಟ ಡಾ. ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಭಾವಪೂರ್ಣ ಕಾರ್ಯಕ್ರಮ ಜರುಗಿತು.ಈ ಸಂದರ್ಭ ಯುವಕರು ಹಾಗೂ ಹಿರಿಯರು ಸೇರಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಹಚ್ಚಿ, ಮಾಲಾರ್ಪಣೆ ಮಾಡುವ ಮೂಲಕ ಭಾವನಾತ್ಮಕ ನಮನ ಸಲ್ಲಿಸಿದರು.ಪೂಜೆಯ ನಂತರ ಮಾತನಾಡಿದ ಊರಿನ ಯುವ ಮುಖಂಡ ಪಿಂಟು ಘತ್ತರಗಿ ಅವರು ಹೇಳಿದರು:> “ನಿಜವಾದ ನಾಯಕನೊಬ್ಬ ಹೇಗಿರಬೇಕು ಎಂಬುದಕ್ಕೆ ಪುನೀತ್ ರಾಜಕುಮಾರ್ ಅವರೇ ಉದಾಹರಣೆ. ಸಮಾಜಕ್ಕಾಗಿ ತಮ್ಮ ಕಾಯಕದ ಮೂಲಕ ನೆರವು ನೀಡಿದರೂ, ಅದನ್ನು ಎಂದಿಗೂ ಪ್ರಚಾರ ಮಾಡದ ವ್ಯಕ್ತಿತ್ವ ಅವರದು. ಬಲಗೈಯಲ್ಲಿ ದಾನ ಮಾಡಿದರೂ ಎಡಗೈಗೂ ತಿಳಿಯದಂತಹ ಮಾನವೀಯತೆ ಅವರಲ್ಲಿ ತುಂಬಿತ್ತು. ಅವರು ನಮ್ಮ ಭಾಗದ ಎಲ್ಲಾ ಯುವಕರಿಗೆ ಪ್ರೇರಣೆ, ಮತ್ತು ಈ ದಿನವು ನಮ್ಮ ಚಲನಚಿತ್ರ ಲೋಕಕ್ಕೆ ಕರಾಳ ದಿನ.”ಕಾರ್ಯಕ್ರಮದಲ್ಲಿ ಮಾತಾ ಮಾಣಿಕೇಶ್ವರ ವೃತ್ತದ ಹಿರಿಯರು, ಯುವಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತ್ ರಾಜಕುಮಾರ್ ಅವರ ಆತ್ಮಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಿದರು.🔸 ವರದಿ: ಇಮ್ರಾನ್ ಮನಿಯಾರ್
