ಶಹಾಬಾದ್

ಅ.28:ಸೇವೆಯಲ್ಲಿ ಮುಂದುವರಿಯಲು ಹಾಗೂ ಬಡ್ತಿ ಪಡೆಯಲು ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್ (TET) ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೈಬಿಡುವಂತೆ ಶಹಾಬಾದ್ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪ್ರಾಥಮಿಕ ಶಿಕ್ಷಣ ಹಂತದ (1 ರಿಂದ 7ನೇ ತರಗತಿ) ಶಿಕ್ಷಕರು ಸೇವೆಯಲ್ಲಿ ಮುಂದುವರೆಯಲು ಹಾಗೂ ಬಡ್ತಿಗೆ ಅರ್ಹರಾಗಲು TET ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಆದರೆ, ಸರ್ಕಾರವು 2017ರ ವೃಂದ ಮತ್ತು ನೇಮಕಾತಿ ನಿಯಮಗಳ ವ್ಯಾಪ್ತಿಗೆ 1 ರಿಂದ 7ನೇ ತರಗತಿಯ ಶಿಕ್ಷಕರನ್ನಷ್ಟೇ ಸೀಮಿತಗೊಳಿಸಿದೆ.ಈ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಾಂಕ 04/09/2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, 1ರಿಂದ 7ನೇ ತರಗತಿಯ RESTORE ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಅದರಲ್ಲಿ 6ರಿಂದ 7ನೇ ತರಗತಿ RESTORE ಮಾಡುವಲ್ಲಿ TET ಕಡ್ಡಾಯ ಅಂಶವನ್ನು ಕೈಬಿಡಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.ಈ ಕುರಿತು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸುವ ಪತ್ರಗಳನ್ನು 28/10/2025 ರಂದು ಮಾನ್ಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ರವರಿಗೆ ಶಹಾಬಾದ್ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅಂಚೆ ಮೂಲಕ ಕಳುಹಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಶಿವಪುತ್ರ ಕರಣಿಕ, ಉಪಾಧ್ಯಕ್ಷೆ ಶ್ರೀಮತಿ ಸುಲೋಚನಾ ಜಾಧವ್, ಸದಸ್ಯರು ಶ್ರೀ ಶಿವಲಿಂಗಪ್ಪ ಹೆಬ್ಬಾಳ್ಕರ್, ಶ್ರೀ ಬನ್ನಪ್ಪ ಸೈದಾಪುರ, ಶ್ರೀ ನರಸಪ್ಪ.ಕೆ, ರವೀಂದ್ರ, ಹಬೀಬ್, ನಜೀರ್ ಮುಲ್ಲಾ ಹಾಗೂ ಇತರೆ ಶಿಕ್ಷಕರು ಉಪಸ್ಥಿತರಿದ್ದರು. ವರದಿ: ಅನಿಲಕುಮಾರ್ ಮೈನಾಳಕರ್, ಶಹಾಬಾದ್
