ದತ್ತನ ಸನ್ನಿಧಿಯಲ್ಲಿ ನವೆಂಬರ್‌ 5ರಿಂದ ಕಾರ್ತಿಕೋತ್ಸವ ಭಕ್ತಿ ಭಾವದಿಂದ ಆರಂಭ

ಅಫಜಲಪೂರ ಅ.30:ತಾಲೂಕಿನ ಪ್ರತಿಷ್ಠಿತ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಗಾಣಗಾಪೂರದ ಶ್ರೀ ದತ್ತಾತ್ರೇಯ ದೇವಾಲಯದ ಕಾರ್ತಿಕೋತ್ಸವ ಕಾರ್ಯಕ್ರಮ ನವೆಂಬರ್‌ 5ರಂದು ಭಕ್ತಿ ಭಾವದಿಂದ ಪ್ರಾರಂಭವಾಗಲಿದೆ ಎಂದು ದೇವಾಲಯದ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ ಭಟ್ ಪೂಜಾರಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.ಅವರು ತಿಳಿಸಿದಂತೆ, ನವೆಂಬರ್‌ 5ರಂದು ಗೌರಿ ಹುಣ್ಣಿಮೆ ಹಾಗೂ ಕಾರ್ತಿಕ ಪೂರ್ಣಿಮೆ ಪ್ರಯುಕ್ತ ಮಧ್ಯಾಹ್ನ 12.30ಕ್ಕೆ ದತ್ತ ಮಹಾರಾಜರ ಪಲ್ಲಕ್ಕಿ ಮೆರವಣಿಗೆ ದೇವಾಲಯದಿಂದ ಆರಂಭವಾಗಿ, ಹತ್ತು ಹಲವು ವಾದ್ಯಗಳ ಸಡಗರದ ನಡುವೆ ಕೂಡಲಸಂಗಮಕ್ಕೆ ರಾತ್ರಿ 10 ಗಂಟೆಗೆ ತಲುಪಲಿದೆ.ನವೆಂಬರ್‌ 6ರಂದು ಮಧ್ಯಾಹ್ನ 1 ಗಂಟೆಗೆ ಮಹಾಭೋಜನ ಕಾರ್ಯಕ್ರಮ ನಡೆಯಲಿದ್ದು, ನಂತರ ಭಕ್ತರ ಸಂಘಟನೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಲಸಂಗಮ ಪ್ರದೇಶದಲ್ಲಿ ಜರಗಲಿವೆ. ಅದಾದ ಬಳಿಕ ರಾತ್ರಿ 10 ಗಂಟೆಗೆ ಪುನಃ ದತ್ತ ಮಹಾರಾಜರ ಪಲ್ಲಕ್ಕಿ ಮೆರವಣಿಗೆ ಆರಂಭವಾಗಿ ಬೆಳಿಗ್ಗೆ 4 ಗಂಟೆಗೆ ದೇವಾಲಯಕ್ಕೆ ವಾಪಸು ಆಗಲಿದೆ.ಕಾರ್ಯಕ್ರಮದ ಸಂದರ್ಭದಲ್ಲಿ ದತ್ತ ಮಹಾರಾಜರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪಾವನರಾಗುವಂತೆ ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಅರ್ಚಕರಾದ ಮನೋಹರ್ ಪೂಜಾರಿ, ಚಂದ್ರವಿಲಾಸ್ ಪೂಜಾರಿ, ಉದಯ ಪೂಜಾರಿ, ಕರಣಾಕರ್ ಪೂಜಾರಿ, ಪ್ರಖ್ಯಾತ್ ಪೂಜಾರಿ, ಪ್ರಸನ್ನ ಪೂಜಾರಿ, ನರಹರಿ ಪೂಜಾರಿ, ದಿಗಂಬರ್ ಪೂಜಾರಿ, ಪ್ರಫುಲ್ ಪೂಜಾರಿ, ಭಾರತ ಪೂಜಾರಿ, ದೇವು ಪೂಜಾರಿ, ಪುರುಷೋತ್ತಮ ಪೂಜಾರಿ, ಸ್ವರೂಪ್ ಪೂಜಾರಿ, ಸರ್ವೇಶ್ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.

ವರದಿ: ಇಮ್ರಾನ್ ಮನಿಯಾರ ಅಫಜಲಪೂರ

Leave a Reply

Your email address will not be published. Required fields are marked *

error: Content is protected !!