ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ – ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಮನೆಯ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ

ಅಫಜಲಪೂರ, ನ.8:
ಕಲಬುರಗಿ ಜಿಲ್ಲೆಯ ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾ ಆಡಳಿತದಿಂದ ಉಂಟಾಗಿರುವ ವಿಳಂಬದ ವಿರುದ್ಧ ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಅವರ ನಿವಾಸದ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು.

ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದ ವಿಠ್ಠಲ್ ಹೇರೂರ ಅವರ ಶಕ್ತಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಳವಾರ ಸಮುದಾಯದ ಮುಖಂಡರು ಈ ಕುರಿತು ಮಾಹಿತಿ ನೀಡಿದರು.

ಸಮುದಾಯದ ನಾಯಕ ದಿಗಂಬರ ಡಾಂಗೆ ಅವರು ಮಾತನಾಡಿ, “2023ರಲ್ಲಿ ಬಿಜೆಪಿ ಸರ್ಕಾರ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಅನುಮೋದನೆ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ನಿರ್ಣಯವನ್ನು ತಡೆಹಿಡಿದಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಶಾಸಕರಿಂದ ಈ ವಿಷಯಕ್ಕೆ ಸ್ಪಂದನೆ ಸಿಗದ ಹಿನ್ನೆಲೆ, ನವೆಂಬರ್ 10ರಂದು ಪ್ರತಿಯೊಬ್ಬ ಶಾಸಕರ ಮನೆ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ,” ಎಂದರು.

ಮುಂದೆ ಮಾತನಾಡಿದ ಯಲ್ಲಪ್ಪ ರಮಗಾ ಅವರು, “2022ರಲ್ಲಿ ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಿದೆ. ರಾಷ್ಟ್ರಪತಿಗಳ ಅಂಗೀಕಾರವೂ ಸಿಕ್ಕಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಶಾಸಕರು ಈ ನಿರ್ಣಯವನ್ನು ಜಾರಿಗೆ ತರಲು ತಡೆಹಿಡಿದಿದ್ದಾರೆ,” ಎಂದು ಆರೋಪಿಸಿದರು.

ದಿಗಂಬರ ಮುದಕಣ ಅವರು, “ದೇಶದ 28 ರಾಜ್ಯಗಳಲ್ಲಿ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಕಲಬುರಗಿಯಲ್ಲಿ ಮಾತ್ರ ನಮ್ಮ ಸಮಾಜದ ಯುವಕರು ಮತ್ತು ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಹುದ್ದೆ ನೇಮಕಾತಿ ಹಾಗೂ ಶಿಕ್ಷಣ ದಾಖಲಾತಿ ಪ್ರಕ್ರಿಯೆಗಳಲ್ಲಿ ವಿಳಂಬ ಉಂಟಾಗಿದೆ. ಆದ್ದರಿಂದ ನವೆಂಬರ್ 10ರಂದು ಅಫಜಲಪೂರ ಶಾಸಕರಾದ ಎಂ.ವೈ. ಪಾಟೀಲ್ ಅವರ ಮನೆ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಗಣ್ಣ ಬೆಳಗುಂಪಿ, ಬಸವರಾಜ್ ಹೇರೂರ, ದತ್ತು ಹೇರೂರ, ರಾಕೇಶ್ ವಡಗೇರಿ, ಭಾಗಣ್ಣ ವಡಗೇರಿ, ಪಿಂಟು ಘತ್ತರಗಿ, ಕಾಂತು ಮಾವೂರ್, ಶಾಂತಪ್ಪ ಮುದಕಣ ಹಾಗೂ ಶ್ರೀಪಾದ ಬಳಗುಂಪಿ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸಮುದಾಯದವರು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ಎಸ್‌ಟಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಆರಂಭಿಸಬೇಕೆಂದು ಆಗ್ರಹಿಸಿದರು.ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ – ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಮನೆಯ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ

ಅಫಜಲಪೂರ, ನ.8:
ಕಲಬುರಗಿ ಜಿಲ್ಲೆಯ ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾ ಆಡಳಿತದಿಂದ ಉಂಟಾಗಿರುವ ವಿಳಂಬದ ವಿರುದ್ಧ ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಅವರ ನಿವಾಸದ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು.

ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದ ವಿಠ್ಠಲ್ ಹೇರೂರ ಅವರ ಶಕ್ತಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಳವಾರ ಸಮುದಾಯದ ಮುಖಂಡರು ಈ ಕುರಿತು ಮಾಹಿತಿ ನೀಡಿದರು.

ಸಮುದಾಯದ ನಾಯಕ ದಿಗಂಬರ ಡಾಂಗೆ ಅವರು ಮಾತನಾಡಿ, “2023ರಲ್ಲಿ ಬಿಜೆಪಿ ಸರ್ಕಾರ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಅನುಮೋದನೆ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ನಿರ್ಣಯವನ್ನು ತಡೆಹಿಡಿದಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಶಾಸಕರಿಂದ ಈ ವಿಷಯಕ್ಕೆ ಸ್ಪಂದನೆ ಸಿಗದ ಹಿನ್ನೆಲೆ, ನವೆಂಬರ್ 10ರಂದು ಪ್ರತಿಯೊಬ್ಬ ಶಾಸಕರ ಮನೆ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ,” ಎಂದರು.

ಮುಂದೆ ಮಾತನಾಡಿದ ಯಲ್ಲಪ್ಪ ರಮಗಾ ಅವರು, “2022ರಲ್ಲಿ ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಿದೆ. ರಾಷ್ಟ್ರಪತಿಗಳ ಅಂಗೀಕಾರವೂ ಸಿಕ್ಕಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಶಾಸಕರು ಈ ನಿರ್ಣಯವನ್ನು ಜಾರಿಗೆ ತರಲು ತಡೆಹಿಡಿದಿದ್ದಾರೆ,” ಎಂದು ಆರೋಪಿಸಿದರು.

ದಿಗಂಬರ ಮುದಕಣ ಅವರು, “ದೇಶದ 28 ರಾಜ್ಯಗಳಲ್ಲಿ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಕಲಬುರಗಿಯಲ್ಲಿ ಮಾತ್ರ ನಮ್ಮ ಸಮಾಜದ ಯುವಕರು ಮತ್ತು ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಹುದ್ದೆ ನೇಮಕಾತಿ ಹಾಗೂ ಶಿಕ್ಷಣ ದಾಖಲಾತಿ ಪ್ರಕ್ರಿಯೆಗಳಲ್ಲಿ ವಿಳಂಬ ಉಂಟಾಗಿದೆ. ಆದ್ದರಿಂದ ನವೆಂಬರ್ 10ರಂದು ಅಫಜಲಪೂರ ಶಾಸಕರಾದ ಎಂ.ವೈ. ಪಾಟೀಲ್ ಅವರ ಮನೆ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಗಣ್ಣ ಬೆಳಗುಂಪಿ, ಬಸವರಾಜ್ ಹೇರೂರ, ದತ್ತು ಹೇರೂರ, ರಾಕೇಶ್ ವಡಗೇರಿ, ಭಾಗಣ್ಣ ವಡಗೇರಿ, ಪಿಂಟು ಘತ್ತರಗಿ, ಕಾಂತು ಮಾವೂರ್, ಶಾಂತಪ್ಪ ಮುದಕಣ ಹಾಗೂ ಶ್ರೀಪಾದ ಬಳಗುಂಪಿ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸಮುದಾಯದವರು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ಎಸ್‌ಟಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಆರಂಭಿಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!