ಶಹಾಬಾದ್ ತಾಲ್ಲೂಕಿನ ಮಾಲಗತ್ತಿಯಲ್ಲಿ ಶಂಕರನಾಗ್ 71ನೇ ಜನ್ಮದಿನದ ಸಂಭ್ರಮಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ – ಶಂಕರನಾಗ್ ಆಟೋ ಸ್ಟ್ಯಾಂಡ್ ಉದ್ಘಾಟನೆ

ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಟ ಶಂಕರನಾಗ್ ಅವರ 71ನೇ ಜನ್ಮದಿನದ ಅಂಗವಾಗಿ ಶಂಕರನಾಗ್ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ನೆರವೇರಿಸಲಾಯಿತು ಹಾಗೂ “ಶಂಕರನಾಗ್ ಆಟೋ ಸ್ಟ್ಯಾಂಡ್” ನ್ನು ಭಾವಪೂರ್ಣವಾಗಿ ಉದ್ಘಾಟಿಸಲಾಯಿತು. ನಂತರ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯೂ ಮಾಡಲಾಯಿತು.

ಈ ಸಂದರ್ಭದಲ್ಲಿ ಶಂಕರನಾಗ್ ಅಭಿಮಾನಿ ಬಳಗದ ಅಧ್ಯಕ್ಷರಾದ ಅಂಬರೀಶ್ ಸಾಂಗ್ಲಿಯಾನ ರಾವೂರ್ ಅವರಿಗೆ ಆಟೋ ಚಾಲಕರಿಂದ ಗೌರವ ಸನ್ಮಾನ ನಡೆಯಿತು.

ಕರ್ನಾಟಕ ಚಾಲಕರ ಒಕ್ಕೂಟದ ಚಿತಾಪುರ ತಾಲೂಕು ಅಧ್ಯಕ್ಷರಾದ ಜಗನ್ ಕಾಶಿ ಅವರು ಮಾತನಾಡಿ, “ಶಂಕರನಾಗ್ ಅವರು ನಾಲ್ಕು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭವಾಗಬೇಕು ಎಂಬ ಕನಸು ಕಂಡಿದ್ದರು, ಅದು ಇಂದು ನಿಜವಾಗಿದೆ. ಚಾಲಕರ ಹಕ್ಕುಗಳು ಮತ್ತು ಸೌಲಭ್ಯಗಳು ಸರಕಾರದಿಂದ ಅವರಿಗೆ ತಲುಪಬೇಕು. ಹೈವೇ ಬ್ಯಾಡ್ಜ್ ಅಥವಾ ಲೈಸೆನ್ಸ್ ಇಲ್ಲದವರು ನಮ್ಮ ಒಕ್ಕೂಟದ ಮೂಲಕ ಉಚಿತವಾಗಿ ಮಾಡಿಸಿಕೊಳ್ಳಬಹುದು,” ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಅಂಬರೀಶ್ ಸಾಂಗ್ಲಿಯಾನ ರಾವೂರ್ ಅವರು, “ರಾವೂರ್ ಹಾಗೂ ಸುತ್ತಮುತ್ತಲಿನ ಊರಿನ ಗರ್ಭಿಣಿಯರಿಗೆ ಉಚಿತ ಸೇವೆ ನೀಡಲು ಬದ್ಧನಾಗಿದ್ದೇನೆ. ಸಮಾಜ ಸೇವೆಯೇ ನಮ್ಮ ಉದ್ದೇಶ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಶರಣಪ್ಪ ಮಾಲಕ್, ಸದಸ್ಯರಾದ ಮಲ್ಲಣ್ಣ ಇಟಗಿ, ಚಂದ್ರಶೇಖರ್ ರಾವುಕಾರ್, ಶಿವು ಅಲ್ಲೂರ್, ಜಗನ್ ಕಾಶಿ ಹಾಗೂ ಅವರ ಸಹೋದ್ಯೋಗಿಗಳು, ಗುರು ಗುತ್ತೇದಾರ್, ರಜನಿಕಾಂತ್ ಬಾಬಾ ಶಾಬಾದ್, ಮಹಾವೀರ ಮಾಲಗತ್ತಿ ಸೇರಿದಂತೆ ಸ್ಥಳೀಯ ಆಟೋ ಚಾಲಕರು ಭಾಗವಹಿಸಿದ್ದರು.

ವರದಿ: ಸಾಹೇಬ ಪಟೇಲ್ ಎಂ. ಹಸರಗುಂಡಗೀಶಹಾಬಾದ್ ತಾಲ್ಲೂಕಿನ ಮಾಲಗತ್ತಿಯಲ್ಲಿ ಶಂಕರನಾಗ್ 71ನೇ ಜನ್ಮದಿನದ ಸಂಭ್ರಮ
ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ – ಶಂಕರನಾಗ್ ಆಟೋ ಸ್ಟ್ಯಾಂಡ್ ಉದ್ಘಾಟನೆ

ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಟ ಶಂಕರನಾಗ್ ಅವರ 71ನೇ ಜನ್ಮದಿನದ ಅಂಗವಾಗಿ ಶಂಕರನಾಗ್ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ನೆರವೇರಿಸಲಾಯಿತು ಹಾಗೂ “ಶಂಕರನಾಗ್ ಆಟೋ ಸ್ಟ್ಯಾಂಡ್” ನ್ನು ಭಾವಪೂರ್ಣವಾಗಿ ಉದ್ಘಾಟಿಸಲಾಯಿತು. ನಂತರ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯೂ ಮಾಡಲಾಯಿತು.

ಈ ಸಂದರ್ಭದಲ್ಲಿ ಶಂಕರನಾಗ್ ಅಭಿಮಾನಿ ಬಳಗದ ಅಧ್ಯಕ್ಷರಾದ ಅಂಬರೀಶ್ ಸಾಂಗ್ಲಿಯಾನ ರಾವೂರ್ ಅವರಿಗೆ ಆಟೋ ಚಾಲಕರಿಂದ ಗೌರವ ಸನ್ಮಾನ ನಡೆಯಿತು.

ಕರ್ನಾಟಕ ಚಾಲಕರ ಒಕ್ಕೂಟದ ಚಿತಾಪುರ ತಾಲೂಕು ಅಧ್ಯಕ್ಷರಾದ ಜಗನ್ ಕಾಶಿ ಅವರು ಮಾತನಾಡಿ, “ಶಂಕರನಾಗ್ ಅವರು ನಾಲ್ಕು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭವಾಗಬೇಕು ಎಂಬ ಕನಸು ಕಂಡಿದ್ದರು, ಅದು ಇಂದು ನಿಜವಾಗಿದೆ. ಚಾಲಕರ ಹಕ್ಕುಗಳು ಮತ್ತು ಸೌಲಭ್ಯಗಳು ಸರಕಾರದಿಂದ ಅವರಿಗೆ ತಲುಪಬೇಕು. ಹೈವೇ ಬ್ಯಾಡ್ಜ್ ಅಥವಾ ಲೈಸೆನ್ಸ್ ಇಲ್ಲದವರು ನಮ್ಮ ಒಕ್ಕೂಟದ ಮೂಲಕ ಉಚಿತವಾಗಿ ಮಾಡಿಸಿಕೊಳ್ಳಬಹುದು,” ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಅಂಬರೀಶ್ ಸಾಂಗ್ಲಿಯಾನ ರಾವೂರ್ ಅವರು, “ರಾವೂರ್ ಹಾಗೂ ಸುತ್ತಮುತ್ತಲಿನ ಊರಿನ ಗರ್ಭಿಣಿಯರಿಗೆ ಉಚಿತ ಸೇವೆ ನೀಡಲು ಬದ್ಧನಾಗಿದ್ದೇನೆ. ಸಮಾಜ ಸೇವೆಯೇ ನಮ್ಮ ಉದ್ದೇಶ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಶರಣಪ್ಪ ಮಾಲಕ್, ಸದಸ್ಯರಾದ ಮಲ್ಲಣ್ಣ ಇಟಗಿ, ಚಂದ್ರಶೇಖರ್ ರಾವುಕಾರ್, ಶಿವು ಅಲ್ಲೂರ್, ಜಗನ್ ಕಾಶಿ ಹಾಗೂ ಅವರ ಸಹೋದ್ಯೋಗಿಗಳು, ಗುರು ಗುತ್ತೇದಾರ್, ರಜನಿಕಾಂತ್ ಬಾಬಾ ಶಾಬಾದ್, ಮಹಾವೀರ ಮಾಲಗತ್ತಿ ಸೇರಿದಂತೆ ಸ್ಥಳೀಯ ಆಟೋ ಚಾಲಕರು ಭಾಗವಹಿಸಿದ್ದರು.

ವರದಿ: ಸಾಹೇಬ ಪಟೇಲ್ ಎಂ. ಹಸರಗುಂಡಗಿ

Leave a Reply

Your email address will not be published. Required fields are marked *

error: Content is protected !!