ಶಹಾಬಾದ್ ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಡೀರ್ ಭೇಟಿ – ಸಿಬ್ಬಂದಿ, ಸ್ವಚ್ಛತೆ ಹಾಗೂ ಔಷಧಿ ಸಂಗ್ರಹದ ಪರಿಶೀಲನೆ

ಶಹಾಬಾದ್

, ನ.11:ನಗರದ ಸಮುದಾಯ ಆರೋಗ್ಯ

ಕೇಂದ್ರ (ಸರಕಾರಿ ಆಸ್ಪತ್ರೆ)ಗೆ ಲೋಕಾಯುಕ್ತ ಉಪ ಪೊಲೀಸ್ ಅಧಿಕಾರಿ (ಡಿವೈಎಸ್ಪಿ) ಯಾದಗಿರ ಜೆ.ಎಚ್. ಇನಾಮದಾರ ಅವರು ಮಂಗಳವಾರ ದಿಡೀರ್ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು.ಇನಾಮದಾರ ಅವರು ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳಿಂದ ಚಿಕಿತ್ಸೆ ಸರಿಯಾಗಿ ದೊರೆಯುತಿದೆಯೇ, ಆಸ್ಪತ್ರೆಯ ಶೌಚಾಲಯ, ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ತೃಪ್ತಿಕರವಾಗಿದೆಯೇ ಎಂಬುದರ ಬಗ್ಗೆ ನೇರವಾಗಿ ಮಾಹಿತಿ ಪಡೆದುಕೊಂಡರು.ಅದೇ ರೀತಿ ಆಸ್ಪತ್ರೆಯ ಸಿಬ್ಬಂದಿಗಳ ಹಾಜರಾತಿ, ಔಷಧಿಗಳ ಲಭ್ಯತೆ ಮತ್ತು ಸ್ಟಾಕ್‌ ದಾಖಲೆಗಳ ಪರಿಶೀಲನೆ ಮಾಡಿ, ಹೊರಗಿನ ಮೆಡಿಕಲ್‌ಗಳಲ್ಲಿ ಔಷಧಿ ಖರೀದಿ ಮಾಡಿಸಲು ಬಲಾತ್ಕರಿಸಲಾಗುತ್ತಿದೆಯೇ ಎಂಬುದರ ಕುರಿತೂ ವಿಚಾರಿಸಿದರು.ಆಸ್ಪತ್ರೆಯ ಸ್ವಚ್ಛತೆ ಕುರಿತು ಖುದ್ದಾಗಿ ವೀಕ್ಷಣೆ ನಡೆಸಿದ ಲೋಕಾಯುಕ್ತ ಅಧಿಕಾರಿ, ಅಗತ್ಯವಾದ ತಿದ್ದುಪಡಿ ಸಲಹೆಗಳನ್ನು ನೀಡಿದರು.ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ ಪಾಟೀಲ, ಸಂಜಯ ರಾಠೋಡ, ಯೂಸುಫ್ ನಾಕೇದಾರ್, ಲೋಕಾಯುಕ್ತ ಸಿಬ್ಬಂದಿ ಮಲ್ಲಿಕಾರ್ಜನ ಎಚ್ಸಿ, ಮಲ್ಲಿನಾಥ ಪಿಸಿ ಹಾಗೂ ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ವರದಿ : ಅನೀಲಕುಮಾರ್ ಮೈನಾಳಕರ್, ಶಹಾಬಾದ್

Leave a Reply

Your email address will not be published. Required fields are marked *

error: Content is protected !!