ಜೇರಟಗಿ ಕಾಟನ್ ಮಿಲ್‌ನಲ್ಲಿ ಸಿಸಿಐ ಖರೀದಿ ಪ್ರಾರಂಭಿಸಲು ರೈತ ಸಂಘದ ಮನವಿ

ಜೇವರ್ಜೇಗಿ ರಟಗಿ ಗ್ರಾಮದಲ್ಲಿರುವ ಮೆ: ಸೋಮನಾಳ ಕಾಟನ್ ಮಿಲ್‌ನಲ್ಲಿ ಸಿಸಿಐ (ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ) ಖರೀದಿ ಪ್ರಕ್ರಿಯೆ ಪ್ರಾರಂಭವಾಗದಿರುವುದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ (ಮದ್ದರಕಿ) ಹಾಗೂ ಕಲ್ಯಾಣ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ಭೂತಾಳಿ ಹೆಚ್. ಕಾರಗೊಂಡ ಅವರ ನೇತೃತ್ವದಲ್ಲಿ ರೈತ ನಾಯಕರು ಸೇರಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ, ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.> “ಜೇರಟಗಿ ಮಿಲ್‌ನಲ್ಲಿ ಸಿಸಿಐ ಖರೀದಿ ಪ್ರಾರಂಭವಾಗದ ಕಾರಣ ಸುತ್ತಮುತ್ತಲಿನ ಹಳ್ಳಿಗಳ ರೈತರು 25ರಿಂದ 30 ಕಿಮೀ ದೂರದ ಜೇವರ್ಗಿ ಖರೀದಿ ಕೇಂದ್ರಕ್ಕೆ ಹೋಗಿ ಹತ್ತಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರ ಪರಿಣಾಮವಾಗಿ ರೈತರು ಹೆಚ್ಚುವರಿ ಸಾರಿಗೆ ವೆಚ್ಚ, ಸಮಯ ವ್ಯಯ ಹಾಗೂ ಹಣಕಾಸಿನ ನಷ್ಟವನ್ನು ಅನುಭವಿಸುತ್ತಿದ್ದಾರೆ.”ಅವರು ಮುಂದುವರೆದು, ಮಾತನಾಡುತ್ತಾ> “ಜೇರಟಗಿ ಗ್ರಾಮದಲ್ಲಿಯೇ ಮೆ. ಸೋಮನಾಳ ಕಾಟನ್ ಮಿಲ್ ಇರುವುದರಿಂದ ಅಲ್ಲಿಯೇ ಸಿಸಿಐ ಖರೀದಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತ ಸಂಘ ಹಾಗೂ ರೈತ ಸೇನೆಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಿಂಗಣ್ಣ ರದ್ದೆವಾಡಗಿ, ಜೇವರ್ಗಿ ತಾಲ್ಲೂಕ ರೈತ ಸಂಘದ ಅಧ್ಯಕ್ಷ ಸಿದ್ದಲಿಂಗ ಎಚ್. ಪೂಜಾರಿ, ರಾಜು ಸುಬೇದಾರ್ ಗುಡೂರ್ ,ಸಂತೋಷಗೌಡ, ರಮೇಶ್ ಹವಲ್ದಾರ್ ಸೇರಿದಂತೆ ಅನೇಕ ರೈತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!