ಕಬ್ಬು ದರ ಉಲ್ಲಂಘನೆ ವಿರುದ್ಧ ಚೌಡಾಪುರ್‌ನಲ್ಲಿ ಉಗ್ರ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಆಕ್ರೋಶ ಜ್ವಾಲಾಮುಖಿ

ಚೌಡಾಪುರ್ (ಅಫಜಲಪೂರ), ನ.17:
ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯು ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಕಬ್ಬು ದರವನ್ನು ಸಕ್ಕರೆ ಕಾರ್ಖಾನೆ ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆ ಇಂದು ಉಗ್ರ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೃಹತ್ ಹೋರಾಟ ನಡೆಸಿದರು.

ಬೆಳಗ್ಗೆಯಿಂದಲೇ ರೈತರು ಟೈರುಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗುತ್ತಾ ಚೌಡಾಪುರ–ಅಬ್ಜಲ್ಪುರ್, ಅಬ್ಜಲ್ಪುರ್–ಕಲಬುರಗಿ, ಗಾಣಗಾಪುರ–ಕಲಬುರಗಿ, ಹಾಗೂ ಅಫಜಲಪೂರ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಿದರು. ಸುಮಾರು ಎರಡು–ಮೂರು ಗಂಟೆಗಳ ಕಾಲ ಸಾರಿಗೆ ಸ್ಥಗಿತಗೊಂಡ ಪರಿಣಾಮ ಹಲವಾರು ನಾಗರಿಕರು ತೀವ್ರ ಬಳಲಬೇಕಾಯಿತು. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಿದ್ದ ಕೆಲವು ಜನರು ದಾರಿಯಲ್ಲಿ ಸಿಲುಕಿಕೊಂಡು ದಿಕ್ಕತ ಅನುಭವಿಸಿದರು.

ಸ್ಥಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಇಲಾಖೆ ಸಾರ್ವಜನಿಕರ ಮನವಿಗೆ ಸ್ಪಂದಿಸದೆ, “ಮುಂದೆ ಹೋದರೆ ಗಾಡಿಗೆ ಬೆಂಕಿ ಹಚ್ಚುತ್ತಾರೆ” ಎಂದು ಹೆದರಿಸಿರುವುದು ನಾಗರಿಕರಲ್ಲಿ ಆಕ್ರೋಶ ಹುಟ್ಟಿಸಿತು. ಆಸ್ಪತ್ರೆ ಚೀಟಿ ತೋರಿಸಿ ಮನವಿ ಮಾಡಿದರೂ ಕೂಡ ಪೊಲೀಸರು ಬೇಜವಾಬ್ದಾರಿತನದಿಂದ ವರ್ತಿಸಿರುವ ಕುರಿತು ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿ ಕವರೇಜ್ ಮಾಡಲು ಬಂದ ಪತ್ರಕರ್ತರಿಗೂ ಸಹ “ಮೇಲಾಧಿಕಾರಿಗಳ ಅನುಮತಿ ಬೇಕು” ಎಂದು ಅಡ್ಡಿಪಡಿಸಿರುವುದು ಪೊಲೀಸ್ ನಡವಳಿಕೆಗೆ ನಾಗರಿಕರು ಖಂಡನೆ ವ್ಯಕ್ತಪಡಿಸುವಂತಾಯಿತು.

“3160ಕ್ಕೆ ಭರವಸೆ – ಈಗ 3000 ದರ?”

ಸ್ಥಳದಲ್ಲಿ ಮಾತನಾಡಿದ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯ ನಾಯಕರು, “ಅಬ್ಜಲ್ಪುರ್‌ನಲ್ಲಿ ನಡೆದ ಹಿಂದಿನ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ವತಃ ಬಂದು, ಮುಖ್ಯಮಂತ್ರಿ ಆದೇಶದ ಮೇರೆಗೆ ₹3160 ದರ ನಿಗದಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆಯಿಂದಲೇ ನಾವು ಹೋರಾಟ ಹಿಂಪಡೆದೆವು. ಆದರೆ ಈಗ ಕಾರ್ಖಾನೆ ಒತ್ತಡಕ್ಕೆ ಮಣಿದು ₹3000 ಮಾತ್ರ ನಿಗದಿ ಮಾಡಿದ್ದಾರೆ. ಇದು ರೈತರ ಬದುಕಿಗೆ ಹೊಡೆಯುವ ಬಿಲ್ಲು” ಎಂದು ಆರೋಪಿಸಿದರು.

ಮುಂದುವರಿದು, “ಕಲಬುರಗಿ ಜಿಲ್ಲೆಯ ಸಚಿವರು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತವು ಕಾರ್ಖಾನೆಗಳ ಪರವಾಗಿ ವರ್ತಿಸುವುದನ್ನು ನಿಲ್ಲಿಸಿ, ರೈತರ ನಿಜವಾದ ಕಷ್ಟವನ್ನು ಅರಿತು ನ್ಯಾಯಯುತ ದರವನ್ನು ನಿಗದಿ ಮಾಡಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದವರು:
ಶ್ರೀಮಂತ್ ಬಿರಾದಾರ್, ರಮೇಶ್ ಪಾಟೀಲ್, ರಮೇಶ್ ಶೆಟ್ಟಿ, ಶಾಂತಪ್ಪ ಅಣ್ಣಾರಾವ್ ಪಾಟೀಲ್, ಸುಭಾಷ್ ಚಂದ್ರ, ಸಂತೋಷ್ ಸಿದ್ನಾಳ, ಸಿದ್ದು ಮಗ್ಗಿ ,ಗುರುಶಾಂತ, ಬಸವರಾಜ್ ಜಿ. ಶ್ರೀಪಾದ್ ಸಂಡಗೆ, ದೇವತ್ಕಲ್, ಪ್ರಭುಲಿಂಗ ದೇವತ್ಕಲ್, ನಾಗಣ್ಣ ನಂದೂರ್, ನಾಗಣ್ಣ ಸೇರಿದಂತೆ ಅನೇಕ ರೈತ ನಾಯಕರು ಈ ಹೋರಾಟದಲ್ಲಿ ಉಪಸ್ಥಿತರಿದ್ದರು.

ರೈತರು ನ್ಯಾಯಯುತ ಕಬ್ಬು ದರಕ್ಕಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದು, ಜಿಲ್ಲಾಡಳಿತ ಮುಂದಿನ ಹೆಜ್ಜೆಯತ್ತ ಎಲ್ಲರ ಕಣ್ಣು ತಿರುಗಿದೆ.ತಲೆಬರಹ: ಕಬ್ಬು ದರ ಉಲ್ಲಂಘನೆ ವಿರುದ್ಧ ಚೌಡಾಪುರ್‌ನಲ್ಲಿ ಉಗ್ರ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಆಕ್ರೋಶ ಜ್ವಾಲಾಮುಖಿ

ಚೌಡಾಪುರ್ (ಅಫಜಲಪೂರ), ನ.17:
ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯು ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಕಬ್ಬು ದರವನ್ನು ಸಕ್ಕರೆ ಕಾರ್ಖಾನೆ ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆ ಇಂದು ಉಗ್ರ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೃಹತ್ ಹೋರಾಟ ನಡೆಸಿದರು.

ಬೆಳಗ್ಗೆಯಿಂದಲೇ ರೈತರು ಟೈರುಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗುತ್ತಾ ಚೌಡಾಪುರ–ಅಬ್ಜಲ್ಪುರ್, ಅಬ್ಜಲ್ಪುರ್–ಕಲಬುರಗಿ, ಗಾಣಗಾಪುರ–ಕಲಬುರಗಿ, ಹಾಗೂ ಅಫಜಲಪೂರ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಿದರು. ಸುಮಾರು ಎರಡು–ಮೂರು ಗಂಟೆಗಳ ಕಾಲ ಸಾರಿಗೆ ಸ್ಥಗಿತಗೊಂಡ ಪರಿಣಾಮ ಹಲವಾರು ನಾಗರಿಕರು ತೀವ್ರ ಬಳಲಬೇಕಾಯಿತು. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಿದ್ದ ಕೆಲವು ಜನರು ದಾರಿಯಲ್ಲಿ ಸಿಲುಕಿಕೊಂಡು ದಿಕ್ಕತ ಅನುಭವಿಸಿದರು.

ಸ್ಥಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಇಲಾಖೆ ಸಾರ್ವಜನಿಕರ ಮನವಿಗೆ ಸ್ಪಂದಿಸದೆ, “ಮುಂದೆ ಹೋದರೆ ಗಾಡಿಗೆ ಬೆಂಕಿ ಹಚ್ಚುತ್ತಾರೆ” ಎಂದು ಹೆದರಿಸಿರುವುದು ನಾಗರಿಕರಲ್ಲಿ ಆಕ್ರೋಶ ಹುಟ್ಟಿಸಿತು. ಆಸ್ಪತ್ರೆ ಚೀಟಿ ತೋರಿಸಿ ಮನವಿ ಮಾಡಿದರೂ ಕೂಡ ಪೊಲೀಸರು ಬೇಜವಾಬ್ದಾರಿತನದಿಂದ ವರ್ತಿಸಿರುವ ಕುರಿತು ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿ ಕವರೇಜ್ ಮಾಡಲು ಬಂದ ಪತ್ರಕರ್ತರಿಗೂ ಸಹ “ಮೇಲಾಧಿಕಾರಿಗಳ ಅನುಮತಿ ಬೇಕು” ಎಂದು ಅಡ್ಡಿಪಡಿಸಿರುವುದು ಪೊಲೀಸ್ ನಡವಳಿಕೆಗೆ ನಾಗರಿಕರು ಖಂಡನೆ ವ್ಯಕ್ತಪಡಿಸುವಂತಾಯಿತು.

“3160ಕ್ಕೆ ಭರವಸೆ – ಈಗ 3000 ದರ?”

ಸ್ಥಳದಲ್ಲಿ ಮಾತನಾಡಿದ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯ ನಾಯಕರು, “ಅಬ್ಜಲ್ಪುರ್‌ನಲ್ಲಿ ನಡೆದ ಹಿಂದಿನ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ವತಃ ಬಂದು, ಮುಖ್ಯಮಂತ್ರಿ ಆದೇಶದ ಮೇರೆಗೆ ₹3160 ದರ ನಿಗದಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆಯಿಂದಲೇ ನಾವು ಹೋರಾಟ ಹಿಂಪಡೆದೆವು. ಆದರೆ ಈಗ ಕಾರ್ಖಾನೆ ಒತ್ತಡಕ್ಕೆ ಮಣಿದು ₹3000 ಮಾತ್ರ ನಿಗದಿ ಮಾಡಿದ್ದಾರೆ. ಇದು ರೈತರ ಬದುಕಿಗೆ ಹೊಡೆಯುವ ಬಿಲ್ಲು” ಎಂದು ಆರೋಪಿಸಿದರು.

ಮುಂದುವರಿದು, “ಕಲಬುರಗಿ ಜಿಲ್ಲೆಯ ಸಚಿವರು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತವು ಕಾರ್ಖಾನೆಗಳ ಪರವಾಗಿ ವರ್ತಿಸುವುದನ್ನು ನಿಲ್ಲಿಸಿ, ರೈತರ ನಿಜವಾದ ಕಷ್ಟವನ್ನು ಅರಿತು ನ್ಯಾಯಯುತ ದರವನ್ನು ನಿಗದಿ ಮಾಡಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದವರು:
ಶ್ರೀಮಂತ್ ಬಿರಾದಾರ್, ರಮೇಶ್ ಪಾಟೀಲ್, ರಮೇಶ್ ಶೆಟ್ಟಿ, ಶಾಂತಪ್ಪ ಅಣ್ಣಾರಾವ್ ಪಾಟೀಲ್, ಸುಭಾಷ್ ಚಂದ್ರ, ಸಂತೋಷ್ ಸಿದ್ನಾಳ, ಸಿದ್ದು ಮಗ್ಗಿ ,ಗುರುಶಾಂತ, ಬಸವರಾಜ್ ಜಿ. ಶ್ರೀಪಾದ್ ಸಂಡಗೆ, ದೇವತ್ಕಲ್, ಪ್ರಭುಲಿಂಗ ದೇವತ್ಕಲ್, ನಾಗಣ್ಣ ನಂದೂರ್, ನಾಗಣ್ಣ ಸೇರಿದಂತೆ ಅನೇಕ ರೈತ ನಾಯಕರು ಈ ಹೋರಾಟದಲ್ಲಿ ಉಪಸ್ಥಿತರಿದ್ದರು.

ರೈತರು ನ್ಯಾಯಯುತ ಕಬ್ಬು ದರಕ್ಕಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದು, ಜಿಲ್ಲಾಡಳಿತ ಮುಂದಿನ ಹೆಜ್ಜೆಯತ್ತ ಎಲ್ಲರ ಕಣ್ಣು ತಿರುಗಿದೆ.

Leave a Reply

Your email address will not be published. Required fields are marked *

error: Content is protected !!