
ಬೆಂಗಳೂರು, ನವೆಂಬರ್ 16, 2025:ನಗರದ ರಾಮಮೂರ್ತಿ ನಗರದಲ್ಲಿ ಜಾಕ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಇಂಟರ್ನ್ಯಾಷನಲ್ ಕರಾಟೆ ಡೋ ಆರ್ಗನೈಸೇಶನ್ ಕ್ಯೋಕುಶಿನ್ ಕೈ ಕಾನ್ ಸೊನೋಡಾ ಗ್ರೂಪ್ (ಐಕೊಕ್ಸ್–ಜಪಾನ್) ವತಿಯಿಂದ ದಕ್ಷಿಣ ಭಾರತದ ಮೊದಲ ಕ್ಯೋಕುಶಿನ್ ಕೈ ಕಾನ್ ಸೊನೋಡಾ ಗ್ರೂಪ್ ಟೂರ್ನಮೆಂಟ್ ವಿಜೃಂಭಣೆಯಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಶಿಸ್ತು, ಕೌಶಲ್ಯ ಮತ್ತು ನೈಜ ಕ್ಯೋಕುಶಿನ್ ಮನೋಭಾವವನ್ನು ಪ್ರದರ್ಶಿಸಿದರು.ಟೂರ್ನಮೆಂಟ್‌ನಲ್ಲಿ ವಿವಿಧ ಡೋಜೋಗಳ ಸ್ಪರ್ಧಿಗಳು ಕುಮೈಟ್ ಮತ್ತು ಕಾಟಾ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.ಕುಮೈಥೆ ವಿಭಾಗದ ಫಲಿತಾಂಶಗಳುಪ್ರಥಮ ಸ್ಥಾನ:ಸಂಪೈ ಸುಮಿತ್ ಅಥರ್ವ ದ್ವಿತೀಯ ಸ್ಥಾನ:ಸಂಪೈ ತಕಶಶೀಲ ಪೃಥ್ವಿ,ಶ್ರೇಯಾಶ್ ರುತಿಕಕುಮಾರ ತೃತೀಯ ಸ್ಥಾನ:ಸಂಪಾಯಿಶಿವರಾಜ,ಯದುವೀರ,ಆಕಾಶ,ವಿಷ್ಣು,ಪುರುಷೋತ್ತಮ, ರೋಹಿತ್ ,ಸ್ವಾತಿ ಕಟಾ ವಿಭಾಗದ ಫಲಿತಾಂಶಗಳು ತೃತೀಯಸ್ಥಾನ:ಸಂಪೈಸುಮಿತ,ಪುರುಷೋತ್ತಮ,ಸಹನಾ ಕರ್ನಾಟಕ ಸಂಯೋಜಕರಾದ ಎಎಂಆರ್ ಕರಾಟೆ ಕ್ಲಬ್ ಭಾರತ ಶಾಖೆಯ ಮುಖ್ಯಸ್ಥ ಶ್ರೀ ಸನ್ಸಾಯ್ ಅಕ್ಷಯ್ ಕುಮಾರ್ ರಾಥೋಡ್ (ಎಂ.ಎಸ್. ಪಾಟೀಲ್ ಡೋಜೋ – ರಶ್ಮಿ ಕಾಲೇಜು ಕ್ಯಾಂಪಸ್) ಅವರ ಮಾರ್ಗದರ್ಶನದಲ್ಲಿ ತಂಡವು ಶ್ಲಾಘನೀಯ ಧೈರ್ಯ ಮತ್ತು ಕ್ರೀಡಾತ್ಮಕತೆಯನ್ನು ತೋರಿಸಿತು.ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಂಘಟಕರು, ಸಂಪಾಯಿ ಮತ್ತು ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.ಶುಭಾಶಯ ಕಳುಹಿಸಿದವರು:ಭಾರತಿ ಎನ್. ರೇಶ್ಮಿ ಶರತ್ ಎನ್. ರಶ್ಮಿ ಡಾ. ಗೀತಾ ಪ್ರೊ. ಶಾರದಾಮಣಿ ಎಂ. ಪಾಟೀಲ್ ಮನ್ನೂರಾಮ್ ಡಿ.ರಾಥೋಡ್ ಈ ಟೂರ್ನಮೆಂಟ್ ದಕ್ಷಿಣ ಭಾರತದಲ್ಲಿ ಕ್ಯೋಕುಶಿನ್ ಕರಾಟೆಯ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಿದ್ದು, ಯುವ ಸಮರಕಲಾವಿದರಿಗೆ ಉನ್ನತ ಗುರಿ ಸಾಧನೆಗೆ ಬಲ ನೀಡಿದೆ.
