ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ — ವಿದ್ಯಾರ್ಥಿಗಳಿಂದ ಹರ್ಷೋದ್ಗಾರ

ಕಲಬುರ್ಗಿ: ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿ ಇರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಆವರಣದಲ್ಲಿ, ಬಸವೇಶ್ವರ ಸಮಾಜ ಸೇವಾ ಬಳಗ ಹಾಗೂ ತರಬೇತಿ ಸಂಸ್ಥೆಯ ವತಿಯಿಂದ ಇಂದು ಕನ್ನಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣದೊಂದಿಗೆ ರಾಜ್ಯ ಗೀತೆ ನಾದಗೊಂಡು ಸ್ಥಳ ಸಂಪೂರ್ಣ ಕನ್ನಡಮಯ ವಾತಾವರಣ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಎಚ್. ಬಿ. ಪಾಟೀಲ್, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್. ಬಿರಾದಾರ, ಓಂಕಾರ ವಠಾರ, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಹಾಗೂ ತರಬೇತಿ ಕೇಂದ್ರದ ಅನೇಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡದ ಕುರಿತು ಕಾವ್ಯ ವಾಚನ, ನೃತ್ಯ ಮತ್ತು ಭಾಷಣಗಳ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಹಾಗೂ ಐಕ್ಯತೆಯ ಸಂದೇಶವನ್ನು ಸಾರಿದರು.ಕಾರ್ಯಕ್ರಮದ ಅಂತ್ಯದಲ್ಲಿ ಹರ್ಷೋದ್ಗಾರಗಳ ಮಧ್ಯೆ “ಜೈ ಕನ್ನಡ, ಜೈ ಕರ್ನಾಟಕ” ಘೋಷಣೆಗಳು ಮೊಳಗಿದವು.

Leave a Reply

Your email address will not be published. Required fields are marked *

error: Content is protected !!