ಕಲಬುರಗಿ

ನ.1 — ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣ ಕಚೇರಿಯಲ್ಲಿ ಇಂದು 70ನೇ ಕನ್ನಡ ರಾಜ್ಯೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮ ಕಲಬುರ್ಗಿ ಅವರು ಮಾತನಾಡಿ, “ರಾಜ್ಯೋತ್ಸವದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ನಾವು ವರ್ಷವಿಡೀ ಕನ್ನಡವನ್ನು ಪ್ರೀತಿಸಬೇಕು, ಮಕ್ಕಳಲ್ಲಿ ಕನ್ನಡದ ಅಭಿಮಾನ ಬೆಳೆಸಬೇಕು. ಕನ್ನಡ ನಮ್ಮ ಅಸ್ತಿತ್ವದ ಪ್ರತೀಕ — ನಮ್ಮ ನೆಲ, ಜಲ ಮತ್ತು ಸಂಸ್ಕೃತಿಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ,” ಎಂದು ಹೇಳಿದರು.ಅವರು ಮುಂದುವರಿದು, “ಮಕ್ಕಳಲ್ಲಿ ಕನ್ನಡದ ಬೀಜ ಬಿತ್ತಿ, ಕನ್ನಡದ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿದರೆ, ಕನ್ನಡದ ಧ್ವಜವನ್ನು ಇಡೀ ವಿಶ್ವದ ಎತ್ತರದಲ್ಲಿ ಹಾರಿಸಬಹುದು,” ಎಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಚೇರಿಯ ಸಿಡಿಪಿಓ ಪ್ರೇಮಾ ಕಲಬುರಗಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಭೀಮಬಾಯಿ, ಪದ್ಮಾವತಿ ಹಿರಿಯ ಮೇಲ್ವಿಚಾರಕಿಯರು ಮಂಜುಳಾ, ಇಂದಿರಾ, ಸೀಮಾ ಠಾಕೂರ್,ಸವಿತಾ ಎನ್ ಕೆ, ಮೇಲ್ವಿಚಾರಕಿಯರು ಕಾಂತಮ್ಮ,ಸವಿತಾ ಎನ್ ವಾಯ್, ಶಿಲ್ಪಾ, ವೈಶಾಲಿ, ಉಜ್ವಲಾ, ಪೂಜಾ, ಹೀನಾ, ಚಂದ್ರಕಲಾ ಸವಿತಾ ಬಿ ಹಾಗೂ ಸಿಬ್ಬಂದಿ ವರ್ಗದವರು ಶರಣು, ಚೆನ್ನಬಸು, ಪ್ರವೀಣ್, ಕಮಲಾಕರ್,ನಾಗಮ್ಮ, ಶಿವುಕುಮಾರ್ ಭಾಗವಹಿಸಿ ಕನ್ನಡ ಗೀತೆಗಳೊಂದಿಗೆ ರಾಜ್ಯೋತ್ಸವ ಸಂಭ್ರಮಿಸಿದರು.
