ಕಲ್ಬುರ್ಗಿ:

ಜಿಲ್ಲೆಯ ಶಹಾಬಾದ್ ತಾಲೂಕಿನ ರಾವೂರ್ ಗ್ರಾಮದಲ್ಲಿ ನುವೋಕೋ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇರ್ಫಾನ್ ಸೇಟ್ ಹಾಗೂ ಇಮಾಮ ಸಾಹೇಬ್ ಮೋಸವಲೆ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿ, ತಮ್ಮ ಹಕ್ಕಿಗಾಗಿ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಇಮಾಮ ಸಾಹೇಬ್ ಮೋಸವಲೆ, ಅಮೀರ್ ಹುಸೇನ್ ಮತ್ತು ತಮ್ಮಣ್ಣ ಅಳ್ಳಳ್ಳಿ ಅವರು – “2005 ರಿಂದ ಇಂದಿನವರೆಗೆ 16 ವರ್ಷ ಕಳೆದರೂ ನಾವು ಕಂಪನಿಯಿಂದ ಯಾವುದೇ ನ್ಯಾಯ ಪಡೆಯಲಿಲ್ಲ. ನಮ್ಮ ಜಮೀನು ಕಳೆದುಕೊಂಡು ಬದುಕು ಕಷ್ಟದಲ್ಲಿ ಸಾಗುತ್ತಿದೆ. ಸರ್ಕಾರಗಳು ಬದಲಾದರೂ ನಮ್ಮ ಪರಿಸ್ಥಿತಿ ಬದಲಾಗಲಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.ರೈತರ ಹೇಳಿಕೆಯ ಪ್ರಕಾರ, ರೇಮಂಡ್ಸ್ ಕಂಪನಿ 2005–2006ರಲ್ಲಿ ಯಾವುದೇ ಪ್ರಾಮಾಣಿಕ ಒಪ್ಪಂದವಿಲ್ಲದೆ 1968 ಎಕರೆ ಭೂಮಿಯನ್ನು ಲೀಸ್ ಪಡೆದಿತ್ತು. ನಂತರ 2008–2009ರಲ್ಲಿ ಲಫಾರ್ಜ್ ಇಂಡಿಯಾಗೆ ಮಾರಾಟ ಮಾಡಲಾಗಿತ್ತು. ಲಫಾರ್ಜ್ ಕಂಪನಿ ರೈತರೊಂದಿಗೆ ಪ್ರತಿ ಎಕರೆಗೆ ₹9 ಲಕ್ಷ ಪರಿಹಾರ ಮತ್ತು ಪ್ರತಿ ಸರ್ವೆ ನಂಬರಿಗೆ ಶಾಶ್ವತ ನೌಕರಿ ನೀಡುವುದಾಗಿ ಅಗ್ರಿಮೆಂಟ್ ಮಾಡಿತ್ತು.ಆದರೆ 2016–2017ರಲ್ಲಿ ನುವೋಕೋ ಕಂಪನಿಗೆ ಈ ಭೂಮಿ ಹಸ್ತಾಂತರವಾದ ನಂತರದಿಂದ ಕಂಪನಿ ಯಾವುದೇ ಕೆಲಸ ಪ್ರಾರಂಭಿಸದೆ, ರೈತರಿಗೆ ನೀಡಿದ್ದ ಭರವಸೆಗಳನ್ನು ಕೂಡ ಪೂರೈಸಿಲ್ಲ. ರೈತರು 2017ರಿಂದ 2025ರವರೆಗೆ ತಹಶೀಲ್ದಾರ್, ಎಸಿ, ಡಿಸಿ ಹಾಗೂ ಸ್ಥಳೀಯ ಶಾಸಕರ ಬಳಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.ಇದರಿಂದ ಬೇಸತ್ತ ರೈತರು ಈಗ ಸರ್ಕಾರ ಮತ್ತು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದು —> “ನಮ್ಮ ಜಮೀನಿನ ಲೀಸ್ ರದ್ದು ಮಾಡಿ, ನಮ್ಮ ಭೂಮಿ ನಮಗೆ ವಾಪಸ್ ಮಾಡಬೇಕು. ಇಲ್ಲವಾದರೆ ನಾವು ಜೀವ ತ್ಯಾಗ ಮಾಡಲು ಸಿದ್ಧರಾಗಿದ್ದೇವೆ. ನಮ್ಮ ಜೀವಕ್ಕೆ ಏನಾದರೂ ಆದರೆ ಅದರ ಹೊಣೆ ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲೆ,” ಎಂದು ಘೋಷಿಸಿದ್ದಾರೆ.ಪ್ರತಿಭಟನೆಯಲ್ಲಿ ಇರ್ಫಾನ್ ಸೇಟ್, ಇಬ್ರಾಹಿಂ ಗುಲ್ಬರ್ಗ, ಮೆಹಬೂಬ್ ಬಾಬಾ, ಮೌಜನ್, ಸಾಧಿಕ್ ಮಸುಲ್ದಾರ್, ಮಲ್ಲೇಶಿ ಪೂಜಾರಿ, ಬಸ್ ಪಾರಿಟ್ ಡ್ರೈವಿಂಗ್ ರಾಥೋಡ್, ದ್ರಾವಿಡ್ ಮತ್ತು ಗಾಂಧಿನಗರದ ರೈತ, ಇದೇರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ವರದಿ ಸಾಹೇಬ್ ಪಟೇಲ್
