ಅತನೂರು

: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಫಲಿತಾಂಶ ತೃಪ್ತಿಕರವಾಗಿರದ ಹಿನ್ನೆಲೆ, ಮುಂದಿನ 2025-26ನೇ ಸಾಲಿನಲ್ಲಿ ಉತ್ತಮ ಫಲಿತಾಂಶ ಸಾಧನೆಗಾಗಿ ಶಿಕ್ಷಕರಿಂದ ವಿದ್ಯಾರ್ಥಿಗಳವರೆಗೆ ಸಂಯೋಜಿತ ತಯಾರಿ ಆರಂಭಿಸಲು ಅತನೂರ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಾಳೆ (ನ.3) ಬೆಳಗ್ಗೆ 11.00 ಗಂಟೆಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಾಗಾರದಲ್ಲಿ ಅಫಜಲಪುರ ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಯುವರಾಜ ಗಾಡಿ, ಕ್ಷೇತ್ರ ಸಂಯೋಜನಾಧಿಕಾರಿಗಳು ಹಾಗೂ ವಿವಿಧ ಪ್ರೌಢಶಾಲೆಗಳ ಮುಖ್ಯಗುರುಗಳು ಭಾಗವಹಿಸಲಿದ್ದಾರೆ.ಸಭೆಯಲ್ಲಿ ಕಳೆದ ಸಾಲಿನ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆ ಮಟ್ಟ ಹೆಚ್ಚಿಸುವ ನೂತನ ತರಬೇತಿ ಕ್ರಮಗಳು, ಹಿನ್ನಡೆ ಹೊಂದಿದ ವಿಷಯಗಳ ಗುರುತು ಹಾಗೂ ಪೋಷಕ-ಶಿಕ್ಷಕರ ಸಹಕಾರದ ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.ಶಾಸಕ ಎಂ.ವೈ. ಪಾಟೀಲ ಅವರು ಶಾಲಾ ಮುಖ್ಯಗುರುಗಳಿಗೆ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಪ್ರೇರಣಾದಾಯಕ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
