ಕನ್ನಡ ನಾಡು-ನುಡಿ ನಮ್ಮ ಮನ ಮನೆಯಲ್ಲಿ ಜೀವಂತವಾಗಿರಲಿ – ಶ್ರೀಶೈಲ ಜಗದ್ಗುರುಗಳ ಆಶೀರ್ವಚನ

ಕಲಬುರ್ಗಿ:ಶ್ರೀ ಮಹಾಂತ ಜ್ಯೋತಿ ವಿದ್ಯಾಪೀಠದಲ್ಲಿ ಇಂದು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭವ್ಯ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ 1008 ಶ್ರೀಮದ್ ಜಗದ್ಗುರು ಗಿರಿರಾಜ ಸೂರ್ಯಸಿಂಹಾನಾಧೀಶ್ವರ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.ಅವರು ಮಾತನಾಡಿ, “ಕನ್ನಡ ನಾಡು ಮತ್ತು ಕನ್ನಡ ಭಾಷೆ ನಮ್ಮ ಮನ ಮನಗಳಲ್ಲಿ ಜೀವಂತವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಈ ನೆಲದಿಂದ ಅನೇಕ ಮಹಾನ್ ವ್ಯಕ್ತಿಗಳು ಉದ್ಭವಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಭಾರತದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ ಆ ಮಹನೀಯರು ನಮ್ಮ ಹೆಮ್ಮೆಯ ಕನ್ನಡಿಗರು,” ಎಂದು ಹೇಳಿದರು.ಮುಂದುವರೆದು ಅವರು, “ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಕಾಪಾಡಿ ಮುನ್ನಡೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲೆಯಿದೆ. ಕನ್ನಡ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ರಾರಾಜಿಸಲಿ. ಕನ್ನಡ ಸಾಹಿತ್ಯ ಸಮ್ಮೇಳನಗಳು, ಉಪನ್ಯಾಸಗಳು ಮತ್ತು ಚಿಂತನಾಗೋಷ್ಠಿಗಳು ವರ್ಷಪೂರ್ತಿ ನಡೆಯಲಿ. ಸರ್ಕಾರವು ಕನ್ನಡ ಶಾಲೆಗಳನ್ನು ನಿರ್ಲಕ್ಷ್ಯ ಮಾಡದೆ ಬಲಪಡಿಸಬೇಕು,” ಎಂದು ಕೋರಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಪೂಜ್ಯರಾದ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರು, ಶ್ರೀ ಷ.ಬ್ರ. ವೀರಮಹಾಂತ ಶಿವಾಚಾರ್ಯರು, ವಿದ್ಯಾಪೀಠದ ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿಭಾಗಾಧ್ಯಕ್ಷರು, ಶಿಕ್ಷಕರು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವರದಿ: ಇಮ್ರಾನ್ ಮನಿಯಾರ

Leave a Reply

Your email address will not be published. Required fields are marked *

error: Content is protected !!